== ನರಸಿಂಹ ಭಂಡಾರಿಯವರ ಕಿರು ಪರಿಚಯ == ತಂದೆ: ಸೀನ ಭಂಡಾರಿ, ತಾಯಿ: ರಾಧಮ್ಮ. ಹುಟ್ಟಿದ್ದು: ಶೃಂಗೇರಿ. ವಯಸ್ಸು :೫೪ (೨೦೦೭ರಲ್ಲಿ). ಶಿಕ್ಷಣ:ಎಸ್.ಎಸ್.ಎಲ್.ಸಿ. ವ್ರತ್ತಿ: ಪವರ್ ಟಿಲ್ಲರ್, ಪಂಪ್ ಸೆಟ್ ಮೆಕ್ಯಾನಿಕ್ ಇವರ ವಿಳಾಸ:- ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್, ಕೊಪ್ಪ ೫೭೭೧೨೬, ಚಿಕ್ಕಮಗಳೂರು ಜಿಲ್ಲೆ. == ನರಸಿಂಹ ಭಂಡಾರಿಯವರ ಸಂಶೋಧನೆಗಳು; == ೧ . ಅಡಿಕೆ ಮತ್ತು ಏಲಕ್ಕಿ ಒಣಗಿಸುವ ಡ್ರೈಯರ್ ಗಳು ೫ ವಿಧಗಳಲ್ಲಿ ಲಭ್ಯ ಮತ್ತು ಈ ಡ್ರೈಯರ್ ಗಳು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಾನ್ಯತೆ ಪಡೆದಿವೆ. ಈ ಡ್ರ್ಯೆಯರ್ ಗೆ ಇಂದು ಮ್ಯಾಮ್ ಕೋಸ್ ನಿಂದ ೫೦೦೦ ರೂ ಸಬ್ಸಿಡಿ ಲಭ್ಯವಿದೆ. ೨ . ಹಸಿ ಅಡಿಕೆ ಸುಲಿಯುವ ಯಂತ್ರ ೩ . ಒಣ ಅಡಿಕೆ ಸುಲಿಯುವ ಯಂತ್ರ ೪ . ಅಡಿಕೆ ಪುಡಿ ಮಾಡುವ ಯಂತ್ರ ೫ . ಮಲ್ಟಿ ಪರ್ಪಸ್ ಹ್ಯಾಂಡ್ ಪಂಪ್, ೫ ತರಹದ ಕೆಲಸವನ್ನು ಸುಲಭವಾಗಿ ಮಾಡಬಹುದಾದಂತಹ ಹ್ಯಾಂಡ್ ಪಂಪ್ ೬ . ಪವರ್ ಟಿಲ್ಲರ್ ಮತ್ತು ಸುಲಭವಾಗಿ ಜೋಡಿಸಬಹುದಾದಂತಹ ವಿದ್ಯುತ್ ಶಕ್ತಿಯ ಆಲ್ಟರ್ ನೇಟರ್ ಗಳು. ೭ . ಹರಿಯುವ ನೀರಿನ ಸಹಾಯದಿಂದ ಯಾವುದೇ ವಿದ್ಯುತ್ ಶಕ್ತಿ ಅಥವಾ ಇಂಧನ ಸಹಾಯವಿಲ್ಲದೆ ನೀರನ್ನು ಮೇಲಕ್ಕೆ ಎತ್ತಬಹುದಾದಂತಹ ಹೈಡ್ರೋಪಂಪ್ ಗಳು. ೮ . ರೈತರಿಗೆ ಸುಲಭ ಸಾಗಾಣಿಕೆ ಒಂದು ಚಕ್ರದ ಕೈಗಾಡಿ ಮತ್ತು ವಿವಿಧ ಬಗೆಯ ಕೈಗಾಡಿಗಳು. ೯ . ಏಕಕಾಲದಲ್ಲಿ ಹನ್ನೆರಡು ಹಪ್ಪಳವನ್ನು ಮಾಡಬಹುದಾದ ಯಂತ್ರ. ೧೦ . ಕಾಳುಮೆಣಸಿನ ಕರೆಯಿಂದ ಕಾಳು ಬೇರ್ಪಡಿಸುವ ಯಂತ್ರ ೫ ಮಾಡೆಲ್ ಗಳಲ್ಲಿ ಲಭ್ಯ. (ಸಾಂಬಾರ ಮಂಡಳಿಯಿಂದ ರೂ.೫,೦೦೦ ಸಹಾಯ ಧನ ಲಭ್ಯ) ೧೧ . ಅಲ್ಯೂಮಿನಿಯಂ ದೋಟಿಗಳು ಮತ್ತು ಕಬ್ಬಿಣದ ಲಘು ಏಣಿಗಳು ಕ್ರಷಿಕರಿಗಾಗಿ. ೧೨ . ಅತ್ಯುತ್ತಮವಾದ ಕಬ್ಬಿಣದ ಹಣತೆಗಳು ಮತ್ತಿತರ ಕ್ರಷಿ ಉಪಯೊಗಿ ಯಂತ್ರಗಳು. ೧೩ . ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಸಾಧನ. == ಲಭಿಸಿದ ಪ್ರಶಸ್ತಿಗಳು == ೧ . ಇವರಿಗೆ ನ್ಯಾಷನಲ್ ಇನೋವೇಷನ್ ಪೌಂಡೇಷನ್ ನಿಂದ ೨೦೦೧ರಲ್ಲಿ ಪ್ರಥಮ ರಾಷ್ಟ್ರೀಯ ಪ್ರಶಸ್ತಿ. ೨ . ೨೦೦೨ರಲ್ಲಿ ಕರ್ನಾಟಕ ಸಂಶೋಧಕರ ಆಯ್ಕೆ ಸಮಿತಿಯ ಸದಸ್ಯ ಮತ್ತು ರಾಷ್ಟ್ರಪತಿಯವರೊಡನೆ ಬೇಟಿ. ೩ . ೨೦೦೩ರಲ್ಲಿ ತುಮಕೂರಿನ ಸಿದ್ದಾರ್ಥ ಇನ್ ಸ್ಟಿಟ್ಯೂಟ್ ನ ಗ್ಯಾನ್ ಸೇಲ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ೪ . ಕಲಾ ಚೇತನ ಯುವ ಸಂಸ್ಥೆ ಬೀಜಾಪುರ ಸುವರ್ಣ ಕನ್ನಡಿಗ ಪ್ರಶಸ್ತಿ ೨೦೦೭. ೫ . ಎಸ್ಸೆಲ್ ಗ್ರೂಪ್ ಮತ್ತು ಜೀ ಕನ್ನಡ ವಾಹಿನಿ ಜಂಟಿಯಾಗಿ ನೀಡಿದ, ಕರ್ನಾಟಕದ ಸಮಸ್ತ ಜನರ ಆಯ್ಕೆಯ ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಸಂಶೋಧಕ ಪ್ರಶಸ್ತಿ ೨೦೦೭. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ